Rosa Mystica Hr Pry School Kinnikambla school reopens

ಪೂರ್ಣಿಮಾ

ರೋಸಾ ಮಿಸ್ತಿಕಾ ಹಿರಿಯ ಪ್ರಾಥಮಿಕ ಶಾಲೆ ಕಿನ್ನಿಕಂಬಳ ೨೦೨೫-೨೦೨೬ ನೇ ಸಾಲಿನ ಶೈಕ್ಷಣಿಕ ಶಾಲಾ ಪ್ರಾರಂಭೋತ್ಸವ ದಿನಾಂಕ:೦೨.೦೬.೨೦೨೫ ರಂದು ನಡೆಯಿತು.

ಪ್ರಸ್ತುತ ದಾSಲಾದ ವಿದ್ಯಾರ್ಥಿಗಳನ್ನು ಹಾಗೂ ಅತಿಥಿ ಗಣ್ಯರನ್ನು ಗೌರವ ಪೂರ್ವಕವಾಗಿ ನೃತ್ಯದೊಂದಿಗೆ ವೇದಿಕೆಗೆ ಕರೆ ತರಲಾಯಿತು.

ಶಾಲಾ ಮುಖ್ಯೋಪಾಧ್ಯಾಯಿನಿ ವಂ.ಭ.ವೀಣಾ ರವರ ಅಧ್ಯಕ್ಷತೆಯಲ್ಲಿ ಮುಖ್ಯ ಅತಿಥಿಗಳಾದ ಶಾಲಾ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ನಮಿತಾ ಎಸ್ ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ದೀಪ ಬೆಳಗುವ ಮೂಲಕ ಕರ‍್ಯಕ್ರಮವನ್ನು ಪ್ರಾರಂಭಿಸಲಾಯಿತು.   

 ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವನ್ನು ವಿತರಿಸಿ, ಶೈಕ್ಷಣಿಕ ವರ್ಷಕ್ಕೆ ಶುಭ ಹಾರೈಸಿ ಸಿಹಿತಿಂಡಿ ಹಂಚುವುದರ  ಮೂಲಕ ಕರ‍್ಯಕ್ರಮವನ್ನು  ಕೊನೆಗೊಳಿಸಲಾಯಿತು.

 

Leave a Reply

Your email address will not be published. Required fields are marked *