೨೦೨೫ -೨೬ ನೇ ಸಾಲಿನ ಶಾಲಾ ಪ್ರಾರಂಭೋತ್ಸವವು ದಿನಾಂಕ ೦೨.೦೬.೨೦೨೫ ನೇ ಸೋಮವಾರದಂದು ಬೆಳಿಗ್ಗೆ ೧೦.೩೦ ಕ್ಕೆ ಸರಿಯಾಗಿ ಶಾಲಾ ಸಭಾಂಗಣದಲ್ಲಿ ಮುಖ್ಯೋಪಾಧ್ಯಾಯಿನಿಯವರಾದ ಸಿಸ್ಟರ್ ಪ್ರೆಸಿಲ್ಲಾ ಪ್ಲೋರಿ ಡಿ’ಸೋಜರವರ ನೇತೃತ್ವದಲ್ಲಿ ನೆರವೇರಿತು.
ಶಾಲೆಗೆ ಸೇರಿದ ಹೊಸ ವಿದ್ಯಾರ್ಥಿಗಳನ್ನು ಹಾಗೂ ಎಲ್ಲಾ ವಿದ್ಯಾರ್ಥಿಗಳನ್ನು ಅತಿಥಿಗಳನ್ನು ಶಾಲಾ ಬ್ಯಾಂಡಿನೊAದಿಗೆ, ಒಳಗೆ ಕರೆತರಲಾಯಿತು. ಸಭಾಂಗಣದ ಬಾಗಿಲಿಗೆ ರಿಬ್ಬನ್ನು ಕಟ್ಟಲಾಗಿತ್ತು, ಕಟ್ಟಲಾದ ರಿಬ್ಬನನ್ನು ಅತಿಥಿಗಳು, ವಿದ್ಯಾರ್ಥಿಗಳು ಸೇರಿ ಕತ್ತರಿಸಿದರು.
ಈ ಶೈಕ್ಷಣಿಕ ವರ್ಷವು ಉತ್ತಮ ರೀತಿಯಲ್ಲಿ ನಡೆಯಲು ದೇವರ ಅನುಗ್ರಹ ಪಡೆಯಲು ಮುಖ್ಯ ಶಿಕ್ಷಕರು, ಹಾಗೂ ಸಹ ಶಿಕ್ಷಕರು ಸೇರಿ ಪ್ರಾರ್ಥನಾ ವಿಧಿಯನ್ನು ನಡೆಸಿಕೊಟ್ಟರು, ಪ್ರಾರ್ಥನಾ ವಿಧಿಯಲ್ಲಿ ಪವಿತ್ರಗ್ರಂಥಗಳಾದ ಬೈಬಲ್, ಭಗವದ್ಗೀತೆಯನ್ನು ವಾಚಿಸಲಾಯಿತು., ಬಳಿಕ ವಿದ್ಯರ‍್ಥಿಗಳು, ಅತಿಥಿಗಳಾಗಿ ಆಗಮಿಸಿದಂತಹ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀ ರಾಮನ ಗೌಡ್ರ, ಮಕ್ಕಳ ಹೆತ್ತವರಾದ ಗಾಯತ್ರಿ, ಸಂಗಪ್ಪ ಮುದೇನೂರ, ಮುಖ್ಯ ಶಿಕ್ಷಕಿ, ಸಹಶಿಕ್ಷಕರು, ವಿದ್ಯಾರ್ಥಿಗಳೊಂದಿಗೆ ಸೇರಿ ಜ್ಞಾನದ ಸಂಕೇತವಾದ ದೀಪವನ್ನು ಬೆಳಗಿಸಿ, ವಿವಿಧ ಬೇಡಿಕೆಗಳನ್ನು ದೇವರ ಮುಂದೆ ಇಟ್ಟರು.
ತದನಂತರ ಮುಖ್ಯ ಶಿಕ್ಷಕಿಯವರು ಅತಿಥಿಗಳನ್ನು ವೆದಿಕೆಗೆ ಕರೆದು ಸ್ವಾಗತಿಸಿ. ಅವರ ಕೈಯಿಂದ ವಿದ್ಯಾರ್ಥಿಗಳಿಗೆ ಬರೆಯುವ ಪುಸ್ತಕವನ್ನು ವಿತರಿಸುವ ಕಾರ್ಯಕ್ರಮವನ್ನು ನೆರವೇರಿಸಿದರು ಹಾಗೂ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು
ಈ ಕಾರ್ಯಕ್ರಮದ ಜವಾಬ್ದಾರಿಯನ್ನು ಶಾಲಾ ಶಿಕ್ಷಕಿಯಾದ ಶ್ರೀಮತಿ ತಿಲಕ ವಹಿಸಿದ್ದರು. ಪ್ರಾರಂಭೋತ್ಸವದ ಸಲುವಾಗಿ ಮಧ್ಯಾಹ್ನ ಭೋಜನದೊಂದಿಗೆ, ಪಾಯಸದ ವ್ಯವಸ್ಥೆಯನ್ನು ಮಾಡಲಾಗಿತ್ತು. ಮಕ್ಕಳು ಪಾಯಸದ ಊಟವನ್ನು ಸವೆದು ಖುಷಿ ಪಟರು.





