ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ – ವಿಶ್ವ ಪರಿಸರ ದಿನಾಚರಣೆ

ಶ್ರೀಮತಿ ಜೋಸ್ಲಿನ್ ಟಾಯ್ಸ್ ಮತ್ತು ಶ್ರೀಮತಿ ವೀಕಲಾ

ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025ರ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕಿ ವಂದನೀಯ ಭಗಿನಿ ವೆನಿಶಾ ಬಿ.ಎಸ್. ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ರವೀಂದ್ರ ಐತಾಳ್ ಅವರು ವಿದ್ಯಾರ್ಥಿಗಳಿಗೆ ಪರಿಸರ ದಿನದ ಮಹತ್ವವನ್ನು ವಿವರಿಸಿದರು. ಸಾವಯವ ಕೃಷಿಯ ಮೂಲಕ ಪರಿಸರವನ್ನು ಉಳಿಸಬೇಕೆಂಬ ಸಂದೇಶವನ್ನು ನೀಡಿದ ಅವರು, ವಿದ್ಯಾರ್ಥಿಗಳು ಪರಿಸರದೊಂದಿಗೆ ಬೆಳೆದು, ಉಪಯೋಗದ ಮರಗಳನ್ನು ನೆಡುವ ಮೂಲಕ ನೈಸರ್ಗಿಕ ವಾಸಸ್ಥಳಗಳನ್ನು ಪ್ರಾಣಿ-ಪಕ್ಷಿಗಳಿಗೆ ಒದಗಿಸಬೇಕೆಂದು ಪ್ರೇರಣೆ ನೀಡಿದರು.

“ಪ್ಲಾಸ್ಟಿಕ್ ಮುಕ್ತ ಪರಿಸರ” ಎಂಬ ಧ್ಯೇಯ ವಾಕ್ಯದೊಂದಿಗೆ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಹಾಡು, ಭಾಷಣ, ಘೋಷಣೆಗಳು ಮತ್ತು  ಅಭಿನಯಗೀತೆಗಳ ಮೂಲಕ ಜಾಗೃತಿ ಮೂಡಿಸಿದರು. ಅಧ್ಯಕ್ಷರಾಗಿ ಮಾತನಾಡಿದ ಭಗಿನಿ ವೆನಿಶಾ ಬಿ.ಎಸ್. ಅವರು ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಕನಿಷ್ಠ ಒಂದೊಂದು ಗಿಡವನ್ನು ನೆಟ್ಟು ಬೆಳೆಸಬೇಕು ಎಂದು ಸಲಹೆ ನೀಡಿದರು. ಶಿಕ್ಷಕಿ ಜೋಸ್ಲಿನ್ ಪಾಯ್ಸ್ ಸ್ವಾಗತಿಸಿ, ಶಿಕ್ಷಕಿ ವೀಕಲಾ ವಂದಿಸಿದರು. ಶಿಕ್ಷಕಿ ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *