ರೋಸಾ ಮಿಸ್ತಿಕಾ ಶಿಕ್ಷಕಿ ತರಬೇತಿ ಸಂಸ್ಥೆ ಎನ್ . ಎಸ್‌ .ಎಸ್‌ನ ವಾರ್ಷಿಕ ವಿಶೇಷ ಶಿಬಿರ

Mrs Veena Bennis

ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಇಲಾಖೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯ ಬೆಂಗಳೂರು ಮತ್ತು ರೋಸಾ ಮಿಸ್ತಿಕಾ ಶಿಕ್ಷಕಿಯರ ತರಬೇತಿ ಸಂಸ್ಥೆ ಕಿನ್ನಿಕಂಬಳ ,ಮಂಗಳೂರು ತಾಲೂಕು ದ.ಕ ಜಿಲ್ಲೆ ಇದರ ಸಂಯುಕ್ತ ಆಶ್ರಯದಲ್ಲಿ 2025-2026 ಶೈಕ್ಷಣಿಕ ಸಾಲಿನ ರಾಷ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನ ಸಮಾರಂಭವು ದಿನಾಂಕ 22.09.2025 ಸೋಮವಾರ ಜೀವದಾನ ಚಾರಿಟೇಬಲ್‌ ಟ್ರಸ್ಟ್‌ ಕಿನ್ನಿಕಂಬಳ , ಮಂಗಳೂರು ಇಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಕೋಡಿಯಾಲ್‌ಬೈಲ್‌ ಮಂಗಳೂರು ಇದರ ಉಪನಿರ್ದೇಶಕರು (ಅಭಿವೃದ್ಧಿ) ಹಾಗೂ ಪ್ರಾಂಶುಪಾಲರು   ಶ್ರೀ ಸದಾನಂದ ಪೂಂಜ ಇವರು ಶಿಬಿರದ ಉದ್ಘಾಟನೆ ಗೈದು ಏಳು ದಿವಸದ ಶಿಬಿರದ ಅನುಭವವು ನಾನು ಎಂಬ ಅಹಂ ಬಿಟ್ಟು ನಾವು ಎಂಬ ನಿಸ್ವಾರ್ಥ ಸೇವೆಯ ಮೂಲಕ ಸಮಾಜಮುಖಿ ಭಾವಿ ಶಿಕ್ಷಕರಾಗುವುದರ ಜೊತೆಗೆ ಜೀವನ ಕೌಶಲಗಳನ್ನು ಅಭಿವೃದ್ಧಿಗೊಳಿಸಲು ಸಹಕಾರಿಯಾಗಲಿ  ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಂ.ಭ.ಪ್ಲಾವಿಯ ವಿಲ್ಮ ಬೆಥನಿ ಸಂಸ್ಥೆಯ  ಮಂಗಳೂರು ಪ್ರಾಂತ್ಯದ Councillor and Co-ordinator of the Social Ministry  ಅವರು ಈ ಶಿಬಿರವು ಶಿಬಿರಾರ್ಥಿಗಳಲ್ಲಿ ಸೇವಾ ಮನೋಭಾವ ಮೂಡಿಸುವುದರ ಮೂಲಕ “ಸೇವೆಯಲ್ಲಿರುವ  ಶಕ್ತಿ , ಸಣ್ಣ ಕೆಲಸಗಳಲ್ಲಿರುವ ಬಲ” ,ಸಮಾಜದ ಉತ್ತಮ  ನಾಗರಿಕರಾಗಿ ರೂಪಿಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸಿದರು. ಮುಖ್ಯ ಅತಿಥಿಗಳಾದ ವಂ.ಭ.ಸಿಮಿಲಿ,ನಿರ್ದೇಶಕರು ಜೀವದಾನ ಚಾರೀಟೇಬಲ್‌ ಟ್ರಸ್ಟ್‌ ಕಿನ್ನಿಕಂಬಳ ಮಂಗಳೂರು,ವಂ.ಭ.ಲೀನಾ ಪಿರೇರಾ ಬಿ.ಎಸ್‌, ಮುಖ್ಯಸ್ಥರು ರೋಸಾ ಮಿಸ್ತಿಕಾ ಕನ್ಯಾಮಠ  ಹಾಗೂ  ವಂ.ಭ.ರೋಸ್ ಲೀಟ ಬಿ.ಎಸ್  ಸಂಚಾಲಕರು ರೋಸಾ ಮಿಸ್ತಿಕಾ ಸಮೂಹ ಸಂಸ್ಥೆ ಕಿನ್ನಿಕಂಬಳ ಮಂಗಳೂರು, ಶ್ರೀಮತಿ ಲವೀನಾ ಲೋಬೊ ಪ್ರಾಂಶುಪಾಲರು ರೋಸಾ ಮಿಸ್ತಿಕಾ ಶಿಕ್ಷಕಿ ತರಬೇತಿ ಸಂಸ್ಥೆ ,ಕಿನ್ನಿಕಂಬಳ  ಮಂಗಳೂರು, ರಾ.ಸೇ.ಯೋಜನೆಯ ಸಂಯೋಜನಾಧಿಕಾರಿ ಶ್ರೀಮತಿ ವೀಣಾ ಬೆನ್ನಿಸ್, ‌ ಉಪಾನ್ಯಾಸಕರು ,ಉಪನ್ಯಾಸಕೇತರ ವರ್ಗ ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ಶಿಬಿರಾರ್ಥಿ ಕುಮಾರಿ ಧನ್ಯಶ್ರೀ ಸ್ವಾಗತಿಸಿದರು, ಕುಮಾರಿ ತೃಪ್ತಿ ವಂದನಾರ್ಪಣೆಗೈದರು.  ಶ್ರೀಮತಿ ರೋಸ್‌ ಲಿನ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

Leave a Reply

Your email address will not be published. Required fields are marked *