ವ.ಭ. ಲಿಲ್ಲಿ ಡಿಸೋಜ ರವರಿಗೆ ಬೀಳ್ಕೊಡುವಿಕೆ

ವ.ಭ. ಲಿಲ್ಲಿ ಡಿಸೋಜರವರು ಬೆಥನಿ ಸಂಸ್ಥೆಯ ಹಲವಾರು ಶಾಲೆಗಳಲ್ಲಿ 4 ವರ್ಷ ಗೌರವ ಶಿಕ್ಷಕಿಯಾಗಿ 17 ವರ್ಷ ಸಹ ಶಿಕ್ಷಕಿಯಾಗಿ ಹಾಗೂ 13 ವರ್ಷಗಳ ಕಾಲ ಮುಖ್ಯಶಿಕ್ಷಕಿಯಾಗಿ ಸೇವೆ ಸಲ್ಲಿಸಿ ರೋಸಾ ಮಿಸ್ತಿಕಾ ಹಿ.ಪ್ರಾ ಶಾಲೆ ಕಿನ್ನಿಕಂಬಳ ಇಲ್ಲಿ ವಯೋ ನಿವೃತ್ತಿಯನ್ನು ಹೊಂದಿ ಜನವರಿ 24 ರಂದು ಬೀಳ್ಕೂಡಲಾಯಿತು. ರಂಗೇರಿದ ಪೂರ್ಣ ಕುಂಭ ವಾದ್ಯಮೇಳದೊಂದಿಗೆ ವಿದ್ಯಾರ್ಥಿಗಳು ಗಣ್ಯರನ್ನು ಸಭಾಂಗಣಕ್ಕೆ ಬರಮಾಡಿಕೊಡರು. ವಿದ್ಯಾರ್ಥಿಗಳು ಪ್ರಾರ್ಥನಾ ನೃತ್ಯದ ಮೂಲಕ ದೇವರ ಕೃಪಾವರಗಳನ್ನು ಬೇಡಿಕೊಂಡರು. ಸ್ವಾಗತ ನೃತ್ಯದ ಮೂಲಕ ಎಲ್ಲರನ್ನು ಸ್ವಾಗತಿಸಿ […]