ತಾರೀಕು 14.07.2025 ರಂದು ರೋಸಾ ಮಿಸ್ತಿಕಾ ಶಿಕ್ಷಕಿ ತರಬೇತಿ ಸಂಸ್ಥೆಯಲ್ಲಿ ಸಂಸ್ಥಾಪನ ದಿನಾಚರಣೆಯನ್ನು ಆಚರಿಸಲಾಯಿತು.ಈ ಕಾರ್ಯಕ್ರಮದ ಅಧ್ಯಕ್ಷರಾಗಿ ವಂ.ಭ.ಮಾರಿಬೆಲ್ಲರವರು ವಹಿಸಿದರು.ಈ ಕಾರ್ಯಕ್ರಮವು ಪ್ರಾರ್ಥನಾ ವಿಧಿಯ ಮೂಲಕ ಪ್ರಾರಂಭಿಸಿ,ಅಧ್ಯಕ್ಷರು,ಪ್ರಾಂಶುಪಾಲರು,ಉಪನ್ಯಾಸಕರು,ಕಛೇರಿ ಸಿಬ್ಬಂದಿ ಹಾಗೂ ವಿದ್ಯಾರ್ಥಿ ಶಿಕ್ಷಕರು ಸಂಸ್ಥಾಪಕರಾದ ಆರ್ೆಫ್.ಸಿ ಮಸ್ಕರೇನಸ್ರವರ ಭಾವಚಿತ್ರಕ್ಕೆ ಪುಪ್ಪಾರ್ಜನೆ ಮಾಡಿ ಗೌರವ ಸಲ್ಲಿಸಿದರು.ಕಾರ್ಯಕ್ರಮದ ಅಧ್ಯಕ್ಷರು ವಂ.ಭ.ಮಾರಿಬೆಲ್ಲರವರು ತಮ್ಮ ಅಧ್ಯಕ್ಷೀಯ ನುಡಿಗಳನಾಡಿ,ಸಂಸ್ಥಾಪಕರ ಧ್ಯೇಯ,ಉದ್ದೇಶ ಹಾಗು ಗುರಿಗಳನ್ನು ತಿಳಿಸಿದರು.ನಮ್ಮ ಸಂಸ್ಥಾಪರು ಒಬ್ಬ ತತ್ವಜ್ಞಾನಿ,ಶಿಕ್ಷಣ ತಜ್ಞರು,ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದವರು,ನಾವು ಅವರ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಬೆಳೆಸಿ ಉತ್ತಮ ಪ್ರಜೆಗಳಾಗಿ ಬಾಳಬೇಕು ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವಿದ್ಯಾರ್ಥಿ ಶಿಕ್ಷಕರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.ಸಂಸ್ಥಾಪಕರ ಮೌಲ್ಯಗಳ ಬಗ್ಗೆಒಂದು ಗೀತ ರೂಪಕ ಪ್ರದರ್ಶಿಸಿದರು.ದ್ವಿತೀಯ ಡಿ.ಎಲ್ಿಡಿ ವಿದ್ಯಾರ್ಥಿ ಶಿಕ್ಷಕಿಯಾದ ಮೋಹಿನಿ ಕಾರ್ಯಕ್ರಮವನ್ನು ನಿರೂಪಿಸಿದರು,ಕುಮಾರಿ ಶ್ರುತಿ ಕಾರ್ಯಕ್ರಮಕ್ಕೆ ಸ್ವಾಗತಿಸಿ,ಕುಮಾರಿ ಝೈಮುನಿಸಾ ವಂದನಾರ್ಪಣೆಗೈದರು.ರಾಷ್ಟಗೀತೆಯ ಮೂಲಕ ಕಾರ್ಯಕ್ರಮನ್ನು ಕೊನೆಗೂಳಿಸಲಾಯಿತು.


ದಿನಾಂಕ 12/07/2025 ಶನಿವಾರದಂದು ಬೆಥನಿ CBSE ಮತ್ತು ರೋಸಾ ಮಿಸ್ತಿಕಾ ಸಮೂಹ ಸಂಸ್ಥೆಗಳು ಒಂದಾಗಿ ಸೇರಿ ರೋಸಾ ಮಿಸ್ತಿಕಾ ಶಿಕ್ಷಕಿಯರ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ 2025-2026ನೇ ಶೈಕ್ಷಣಿಕ ಸಾಲಿನ ಬೆಥನಿ ಸಂಸ್ಥಾಪನಾ ದಿನಾಚರಣೆಯನ್ನು ವಿಜೃಂಭನೆಯಿಂದ ಆಚರಿಸಲಾಯಿತು. ರೋಸಾ ಮಿಸ್ತಿಕಾ ಶಿಕ್ಷಕಿ ತರಬೇತಿ ಸಂಸ್ಥೆಯ ಸಿಬ್ಬಂದಿ ವರ್ಗಾದವರಿಂದ ಪ್ರಾರ್ಥನ ವಿಧಿ,ಈ ದಿನದ ಮಹತ್ವವನ್ನು ಸಾರುವ ಸ್ವರಚಿತ ಶುಭಾಶಯ ಗೀತೆ ಮತ್ತು ಮನರಂಜನಾ ಆಟಗಳನ್ನು ನೆರವೇರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಪ್ರಾಂತ್ಯದ ಪ್ರಾಂತ್ಯಧಿಕರಿಣಿಯ ಸಲಹೆಗಾರರು ವಂ.ಭ.ಡೊನಾ ಸಾಂಕ್ತಿಸ್ ರವರು ವಹಿಸಿ ಬೆಥನಿ ಸಂಸ್ಥೆಯ ಸಂಸ್ಥಾಪಕರು ದೇವರ ಸೇವಕ ಆರ್ೆಫ್.ಸಿ ಮಸ್ಕರೇನಸ್ರವರ ದೂರದೃಷ್ಟಿತ್ವ ಮತ್ತು ಅವರ ಉದ್ಧಾತ ಚಿಂತನೆಯ ಮೂಲಕ ಶಿಕ್ಷಕರಾದ ನಾವು ನಮ್ಮ ಬೋಧನೆಯಲ್ಲಿ ಅವರ ಆರ್ದಶಗಳನ್ನು ಅಳವಡಿಸಿ ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸೋಣ ಎಂಬುದಾಗಿ ಕಿವಿ ಮಾತು ನೀಡಿ ಸಂಸ್ಥಾಪನ ದಿನಕ್ಕೆ ಶುಭ ಹಾರೈಸಿದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರೋಸಾ ಮಿಸ್ತಿಕಾ ಕಾನ್ವೆಂಟಿನ ಮುಖ್ಯಸ್ಥೆ ವಂ.ಭ.ಲೀನಾ ಪಿರೇರಾ ,ರೋಸಾ ಮಿಸ್ತಿಕಾ ಸಮೂಹ ಸಂಸ್ಥೆಗಳ ಸಂಚಲಕರಾದ ವಂ.ಭ.ರೋಸ್ ಲೀಟರವರು ಉಪಸ್ಥಿತರಿದ್ದರು.ಅಂತೆಯೇ ಎಲ್ಲಾ ಸಂಸ್ಥೆಗಳ ಮುಖ್ಯಸ್ಥರು,ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.ರೋಸಾ ಮಿಸ್ತಿಕಾ ಶಿಕ್ಷಕಿಯರ ತರಬೇತಿ ಸಂಸ್ಥೆಯ ಉಪನ್ಯಾಸಕಿ ಶ್ರೀಮತಿ ಜಾಸ್ಮಿನ್ ಮೊರಾಸ್ ರವರು ನೆರೆದ ಸರ್ವರನ್ನು ಸ್ವಾಗತಿಸಿದರು.ಉಪನ್ಯಾಸಕಿ ವೀಣಾ ಬೆನ್ನಿಸ್ ರವರು ವಂದಿಸಿದರು.ಶ್ರೀಯುತ ರೋನಾಲ್ಡ್ ಕಾರ್ಲೊ ಕಾರ್ಯಕ್ರಮವನ್ನು ನಿರ್ವಹಿಸಿದರು.ಕಾರ್ಯಕ್ರಮವನ್ನು ಸಹಬೋಜನದೊಂದಿಗೆ ಕೊನೆಗೊಳಿಸಲಾಯಿತು.ರೋಸಾ ಮಿಸ್ತಿಕಾ ಕಾನ್ವೆಂಟಿನ ಮುಖ್ಯಸ್ಥರಾದ ವಂ.ಭ.ಲೀನಾ ಪಿರೇರಾದವರು ಬೋಜನದ ಮೇಲೆ ಆಶೀರ್ವಾಚನೆಗೈದರು.
