ವ.ಭ. ಲಿಲ್ಲಿ ಡಿಸೋಜ ರವರಿಗೆ ಬೀಳ್ಕೊಡುವಿಕೆ

ವ.ಭ. ಲಿಲ್ಲಿ ಡಿಸೋಜರವರು ಬೆಥನಿ ಸಂಸ್ಥೆಯ ಹಲವಾರು ಶಾಲೆಗಳಲ್ಲಿ 4 ವರ್ಷ ಗೌರವ ಶಿಕ್ಷಕಿಯಾಗಿ 17 ವರ್ಷ ಸಹ ಶಿಕ್ಷಕಿಯಾಗಿ ಹಾಗೂ 13 ವರ್ಷಗಳ ಕಾಲ ಮುಖ್ಯಶಿಕ್ಷಕಿಯಾಗಿ ಸೇವೆ ಸಲ್ಲಿಸಿ ರೋಸಾ ಮಿಸ್ತಿಕಾ ಹಿ.ಪ್ರಾ ಶಾಲೆ ಕಿನ್ನಿಕಂಬಳ ಇಲ್ಲಿ ವಯೋ ನಿವೃತ್ತಿಯನ್ನು ಹೊಂದಿ ಜನವರಿ 24 ರಂದು ಬೀಳ್ಕೂಡಲಾಯಿತು.

ರಂಗೇರಿದ ಪೂರ್ಣ ಕುಂಭ ವಾದ್ಯಮೇಳದೊಂದಿಗೆ ವಿದ್ಯಾರ್ಥಿಗಳು ಗಣ್ಯರನ್ನು ಸಭಾಂಗಣಕ್ಕೆ ಬರಮಾಡಿಕೊಡರು. ವಿದ್ಯಾರ್ಥಿಗಳು ಪ್ರಾರ್ಥನಾ ನೃತ್ಯದ ಮೂಲಕ ದೇವರ ಕೃಪಾವರಗಳನ್ನು ಬೇಡಿಕೊಂಡರು. ಸ್ವಾಗತ ನೃತ್ಯದ ಮೂಲಕ ಎಲ್ಲರನ್ನು ಸ್ವಾಗತಿಸಿ ಗುರುವಂದನೆಯನ್ನು ಕಿರು ಪ್ರಹಸನದ ಮೂಲಕ ಅಭಿನಯಿಸಿ ಶಿಕ್ಷಕಿಗೆ ತಮ್ಮ ಗೌರವವನ್ನು ವ್ಯಕ್ತಪಡಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ವ.ಭ. ವೀಣಾ ಅರಾನ್ಹ ರವರು ನೆರೆದ ಸರ್ವರನ್ನು ತನ್ನ ನುಡಿಗಳಿಂದ ಪ್ರೀತಿ ಪೂರ್ವಕ ಸ್ವಾಗತ ಕೋರಿದದರು.

ಬೆಥನಿ ಆಡಳಿತ ಮಂಡಳಿಯಿಂದ ಮಂಗಳೂರು ಪ್ರಾಂತ್ಯದ ಪ್ರಾಂತ್ಯಧಿಕಾರಿಣಿಯಾದ ವಂ.ಭ ಡಾ ಲಿಲ್ಲಿ ಪಿರೇರಾ ಬಿ.ಎಸ್‌, ಶಿಕ್ಷಣ ಸಂಯೋಜಕಿ ವಂ.ಭ.ಡಾ ಮಾರಿಯೋಲಾ ಬಿ.ಎಸ್, ಶಾಲಾ ಸಂಚಾಲಕಿ, ಸ್ಥಳೀಯ ಕಾನ್ವೆಂಟಿನ ಸುಪೀರಿಯರ್‌, ಮುಖ್ಯೋಪಾಧ್ಯಯಿನಿ, ರಕ್ಷಕ- ಶಿಕ್ಷಕ ಸಂಘದ ಉಪಾದ್ಯಕ್ಷೆ ,ಸನ್ಮಾನಿತರ ಕುಟುಂಬದವರು, ಬದ್ರಿಯಾ ನಗರ ಕ್ಲಸ್ಟರಿನ ಸಿ.ಆರ್.ಪಿ ಶ್ರೀಮತಿ ಶೀಲಾವತಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಇವರು ನಮ್ಮ ಶಾಲೆಗೆ ನೀಡಿದ ಅನೇಕ ಸೇವೆಗಳು ಮತ್ತು ಮಾರ್ಗದರ್ಶನವು ಅನೇಕ ವಿದ್ಯಾರ್ಥಿಗಳ ಬದುಕನ್ನು ಬದಲಾಯಿಸಲು ಕಾರಣವಾಗಿವೆ. ಇವರು ತಮ್ಮ ದೈರ್ಯ, ಚಿಂತನಾ ಶಕ್ತಿಯಿಂದ ಶಾಲೆಯು ಮುಂದುವರೆದ ಮಟ್ಟವನ್ನು ತಲುಪಿಸಲು ಅಗತ್ಯವಿರುವ ಎಲ್ಲಾ ಸಲಹೆಗಳನ್ನು ನೀಡಿದವರು ಎಂದು ಅಧ್ಯಕ್ಷರು ಇವರನ್ನು ಕೊಂಡಾಡಿದರು. ಅವರ ಸೇವೆಯನ್ನು ಹೃದಯಾಂತರಾಳದಿಂದ ಸ್ಮರಿಸಿ ಮುಂದಿನ ಜೀವನವು ಸುಖ ಮಯವಾಗಲಿ ಎಂದು ಹಾರೈಸಿ, ಅತ್ಮೀಯವಾಗಿ ಬೀಳ್ಕೊಟ್ಟರು.
ಬೆಥನಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯ ಪರವಾಗಿ ಶಾಲಾ ಸಂಚಾಲಕಿ ವ. ಭ. ರೋಸ್‌ ಲೀಟಾರವರು ಸನ್ಮಾನ ಪತ್ರ ವಾಚಿಸಿದರು.

ಶಿಕ್ಷಕಿ ತಮ್ಮ 34 ವರ್ಷಗಳ ಸೇವಾವಧಿಯ ಸವಿನೆನಪುಗಳನ್ನು ಮೆಳುಕು ಹಾಕಿ ಎಲ್ಲರಿಗೂ ವಂದನೆಗಳನ್ನು ಸಲ್ಲಿಸಿ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಹಾರೈಸಿದರು.

Leave a Reply

Your email address will not be published. Required fields are marked *