ರೋಸಾ ಮಿಸ್ತಿಕಾ ಪ್ರೌಢಶಾಲೆ ಕಿನ್ನಿಕಂಬಳ 2025 26ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ದಿನಾಂಕ 3 ಜೂನ್ 2025ರಂದು ಆಯೋಜಿಸಲಾಗಿತ್ತು.
ಶಾಲಾ ಸಂಚಾಲಕಿ ವಂ ಭಗಿನಿ ರೋಸ್ಲೀಟ ಬಿ ಎಸ್. ಇವರ ಅಧ್ಯಕ್ಷತೆಯಲ್ಲಿ ದೀಪ ಬೆಳಗಿಸಿ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಯಾಗಿ ಲಯನ್ ರೊನಾಲ್ಡ್ ಐಸಾಕ್ ಗೊಮ್ಸ್ ಉಪಸ್ಥಿತರಿದ್ದು ಕಾರ್ಯಕ್ರಮದಲ್ಲಿ 10 ವಿದ್ಯಾರ್ಥಿಗಳಿಗೆ ಸಹಾಯವನ್ನು ನೀಡಿದರು. ಲಯನ್ ಜೆಫ್ರಿಯನ್ ತಾವ್ರೊ, ಲಯನ್ ಮೆಲ್ವಿನ್ ಸಲ್ಡಾನ್ಹಾ, ಶಿಕ್ಷಕರಕ್ಷಕ ಸಂಘದ ಉಪಾಧ್ಯಕ್ಷ ಶ್ರೀಮತಿ ಉಷಾ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವನ್ನು ವಿತರಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ಮರಿಸ್ಸಾ ಲೂಸಿ ಸರ್ವರನ್ನು ಸ್ವಾಗತಿಸಿದರು.
ವಾದ್ಯ ಮೇಳದೊಂದಿಗೆ ವಿದ್ಯಾರ್ಥಿಗಳನ್ನು ಹಾಗೂ ಅತಿಥಿಗಳನ್ನು ಸ್ವಾಗತಿಸಲಾಯಿತು. ಹತ್ತನೇ ತರಗತಿ ವಿದ್ಯಾರ್ಥಿಗಳು ಅರ್ಥ ಭರಿತವಾದ ಪ್ರಾರ್ಥನ ವಿಧಿಯನ್ನು ನಡೆಸಿಕೊಟ್ಟರು. ಶಿಕ್ಷಕಿ ಶ್ರೀಮತಿ ಸಬೀನಾ ಕ್ರಾಸ್ತಾ ಕಾರ್ಯಕ್ರಮ ನಿರ್ವಹಿಸಿದರು.





