ರೋಸಾ ಮಿಸ್ತಿಕಾ ಕಿನ್ನಿಕಂಬಳ-ಚಕ್ರ ಎಸೆತದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಮುಖ್ಯ ಶಿಕ್ಷಕಿ, ರೋಸಾ ಮಿಸ್ತಿಕಾ ಹಿರಿಯ ಪ್ರಾಥಮಿಕ ಶಾಲೆ ಕಿನ್ನಿಕಂಬಳ

85 ವರ್ಷಗಳ ಇತಿಹಾಸವಿರುವ ರೋಸಾ ಮಿಸ್ತಿಕಾ ಹಿರಿಯ ಪ್ರಾಥಮಿಕ ಶಾಲೆಯು ಹಲವಾರು ಕ್ಷೇತ್ರಗಳಲ್ಲಿ   ಗುರುತಿಸಲ್ಪಟ್ಟಿದೆ. ಶೈಕ್ಷಣಿಕವಾಗಿ ಸಹಪಠ್ಯ ಚಟುವಟಿಕೆಗಳಲ್ಲಿ , ಕ್ರೀಡೆಗಳಲ್ಲಿ, ಅದೆಷ್ಟೋ ಬಹುಮಾನಗಳನ್ನು ಈ ಶಾಲಾ ವಿದ್ಯಾರ್ಥಿಗಳು ಪಡೆದು ಕೊಂಡಿದ್ದಾರೆ. ಈ ಬಾರಿ ಹೋಬಳಿ,ತಾಲೂಕು ಮಟ್ಟದಲ್ಲಿ ನಡೆದ ಕ್ರೀಡಾಕೂಟದಲ್ಲಿ ಹಲವಾರು ಪ್ರಶಸ್ತಿಗಳನ್ನು  ಮುಡಿಗೇರಿಸಿದ್ದಾರೆ. ಜಿಲ್ಲಾ ಮಟ್ಟದಲ್ಲಿ ರೋಸಾ ಮಿಸ್ತಿಕಾ ಶಾಲೆಯ 7ನೇ ತರಗತಿಯ  ಸತ್ಯಂ ಇವನು ಚಕ್ರ ಎಸೆತದಲ್ಲಿ  ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಕ್ರೀಡೆಯಲ್ಲಿ ಶಾಲಾ ಕೀರ್ತಿಯನ್ನು ತಾಲೂಕಿನಿಂದ ಜಿಲ್ಲೆಗೆ, ಜಿಲ್ಲೆಯಿಂದ ರಾಜ್ಯದವರೆಗೆ ಹಬ್ಬಿದ ಸತ್ಯಂಗೆ ಅಭಿನಂದನೆಗಳೊಂದಿಗೆ  ರಾಜ್ಯದಲ್ಲೂ ಜಯ ಶಾಲಿಯಾಗು ಎಂಬ ಶುಭ ಹಾರೈಕೆಗಳು.

Leave a Reply

Your email address will not be published. Required fields are marked *