ಚುಟುಕು ರಚನಾ ಕಮ್ಮಟ ಸೇಂಟ್ ರೇಮಂಡ್ಸ್ ಪ್ರೌಢಶಾಲೆ ವಾಮಂಜೂರು

ಇಲ್ಲಿ ಇಂಟರ್ಯಾಕ್ಟ ಕ್ಲಬ್ ವತಿಯಿಂದ ದಿನಾಂಕ 6 -10 -2025 ರಂದು ಶಾಲಾ ಸಭಾಂಗಣದಲ್ಲಿ ವಿದ್ಯಾರ್ಥಿ ಗಳಲ್ಲಿ ಕನ್ನಡ ಸಾಹಿತ್ಯ ಪ್ರಕಾರ ಗಳಲ್ಲಿ ಒಂದಾದ ಚುಟುಕು ರಚನೆಯ ಬಗ್ಗೆ ತಿಳುವಳಿಕೆ ನೀಡುವ ಹಾಗೂ ಆ ಮೂಲಕ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆಯ ಬಳಕೆಯಲ್ಲಿ ಆಸಕ್ತಿ, ಸಾಹಿತ್ಯದ ಕಡೆಗೆ ಒಲವು ಮೂಡಿಸುವ ನಿಟ್ಟಿನಲ್ಲಿ ಶಾಲೆಯಲ್ಲಿ ಚುಟುಕು ರಚನಾ ಕಮ್ಮಟ ಶಿಬಿರವನ್ನು ಆಯೋಜಿಸಲಾಗಿತ್ತು

 ರೋಟರಿ ಕ್ಲಬ್ ಮಂಗಳೂರು ಮಿಡ್ ಟೌನ್ ನ ನಿಕಟ ಪೂರ್ವ ಅದ್ಯಕ್ಷ ರಾದ ಶ್ರೀ ರಾಲ್ಫ್ ಡಿಸೋಜ ರವರು ಮಾತನಾಡಿ , ಓದಿನ ಜೊತೆಗೆ ಸಾಹಿತ್ಯದ ಇತರ ಮಜಲುಗಳು ವಿದ್ಯಾರ್ಥಿಗಳಿಗೆ ಪರಿಚಯವಾದಂತೆ ಕನ್ನಡ ಭಾಷೆ ಅವರಲ್ಲಿ ಇನ್ನಷ್ಟು ಪರಿಪಕ್ವವಾಗಲು ಸಾಧ್ಯ ಎಂದರು

 ಸೇಂಟ್ ಅ್ಯನ್ಸ್ ಶಿಕ್ಷಕ ತರಬೇತಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಶ್ರೀ ಉಮೇಶ ಕಾರಂತ್, ಸಂಪನ್ಮೂಲ ವ್ಯಕ್ತಿಯಾಗಿ ಶಿಬಿರವನ್ನು ನಿರ್ವಹಿಸುತ್ತ, ಸಾಹಿತ್ಯದ ಆಯಾಮ ಗಳನ್ನು ತಿಳಿಸಿ ಚುಟುಕ ರಚಿಸುವ ಕೌಶಲ್ಯ ಗಳನ್ನು ಮನನ ಮಾಡಿಸಿದರು. ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿ ಚುಟುಕುಗಳನ್ನು ರಚಿಸಿದರು. 

 ಶಿಬಿರದಲ್ಲಿ, ರೋಟರಿ ಕ್ಲಬ್ ಮಿಡ್ ಟೌನ್ ಪ್ರಸಕ್ತ ರೋಟರಿಯ ಯುವಜನ ವಿಭಾಗದ ಮುಖ್ಯಸ್ಥ ರಾದ ಕ್ಯಾಪ್ಟನ್ ಶ್ರೀ ಪ್ಯಾಟ್ರಿಕ್ ಪಾಯ್ಸ , ಶಿಕ್ಷಕ – ರಕ್ಷಕ ಸಂಘದ ಉಪಾಧ್ಯಕ್ಷ ಶ್ರೀ ರವಿಕುಮಾರ್ ಭಾಗವಹಿಸಿದ್ದರು. ಇಂಟರ್ಯಾಕ್ಟ್  ನ ಅದ್ಯಕ್ಷೆ ವಿದ್ಯಾರ್ಥಿನಿ ಭಾಗ್ಯಶ್ರೀ ಅತಿಥಿಗಣ್ಯರನ್ನು ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ವಿದ್ಯಾ ಪಿಂಟೊ ವಂದಿಸಿದರು.ಇಂಟರ್ಯಾಕ್ಟ್  ನ ಸಂಯೋಜಕ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *